ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಕಲಾ ಕದಂಬ ಆರ್ಟ್ ಸೆಂಟರ್ ಸಂಸ್ಥೆ `ಮಾಸದ ಮೆಲುಕು-34` : ರತ್ನಾವತಿ ಕಲ್ಯಾಣ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಜನವರಿ 22 , 2014
ಕಲಾ ಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಪ್ರತೀ ತಿಂಗಳೂ ರಾಧಾಕೃಷ್ಣ ಉರಾಳರ ಪರಿಕಲ್ಪನೆ- ನಿರ್ದೇಶನನದಲ್ಲಿ ನೀಡುತ್ತಾ ಬಂದಿರುವ `ಮಾಸದ ಮೆಲುಕು` ಸರಣಿಯ 34 ನೇ ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 26 ನೇ ಭಾನುವಾರ ಸಂಜೆ 6-00 ಕ್ಕೆ ಮನೋರಂಜಿನಿ ಸಭಾಂಗಣದಲ್ಲಿ ನಡೆಯಲಿದೆ. ಶ್ರೀ ಸಿದ್ಧಿ ಗಣಪತಿ ದೇವಾಲಯದ ಮನೋರಂಜಿನಿ ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ, ಕೆ.ಎಸ್.ಆರ್.ಟಿ.ಸಿ. ಬಡಾವಣೆ, ಚಿಕ್ಕಲಸಂದ್ರ, ಮನೋರಂಜಿನಿ ಸಭಾಂಗಣದಲ್ಲಿ ಅಂದು ಕವಿ ಮುದ್ದಣ ಬರೆದಿರುವ ರತ್ನಾವತಿ ಕಲ್ಯಾಣ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಈ ಪ್ರದರ್ಶನಕ್ಕೆ ಕನ್ನಡ ಉತ್ತರಹಳ್ಳಿ ವಾರ್ಡ್ ಬಿ.ಬಿ.ಎಂ.ಪಿ, ಸದಸ್ಯರಾದ ಶ್ರೀ ರಮೇಶ್ ರಾಜ್, ಸಿವಿಲ್ ಇಂಜಿನೀಯರ್ ಹಾಗೂ ಕಲಾ ಪ್ರೋತ್ಸಾಹಕರಾದ ಬಸವರಾಜ್ ಹೊಸ್ಮಠ್, 92.7 BIG FMನ ಆರ್.ಜೆ ಹಂಸ, ಶ್ರೀ ಸಿದ್ಧಿ ಗಣಪತಿ ದೇವಾಲಯ ಸಮೀತಿಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಮೂರ್ತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕವಿ ಮುದ್ದಣ ಬರೆದ ಯಕ್ಷಗಾನ ಪ್ರಸಂಗಗಳಲ್ಲಿ ಬಹಳ ಆಕರ್ಷಕ ಪದ ಬಂಧ, ಸನ್ನಿವೇಶ ಸಂಯೋಜನೆ, ಪಾತ್ರಗಳ ವೈವಿಧ್ಯ ಇರುವ ಕಥಾಹಂದರ ರತ್ನಾವತಿ ಕಲ್ಯಾಣ. ವಂಗ ದೇಶದ ಅರಸನ ಮಗಳು ರತ್ನಾವತಿಯನ್ನು ಬಯಸುವ ಭದ್ರಸೇನ, ಸಾಮ- ದಾನದ ಪ್ರಯತ್ನ ವಿಫಲವಾದಾಗ ಬಲ ಪ್ರಯೋಗ ಮಾಡಿ ರಾಜ ದೃಢವರ್ಮನನ್ನು ಸೋಲಿಸಿ ರತ್ನಾವತಿಯನ್ನು ಅಪಹರಿಸಿ ತರುತ್ತಾನೆ. ತಂದೆ ಮೊದಲೇ ಮದುವೆಗೆ ನಿಶ್ಚಯಿಸಿದಂತೆ, ಕೌಶಂಬಿಯ ದೊರೆ ವತ್ಸಾಖ್ಯನಿಗೆ ಮನ ಸೋತಿರುವ ರತ್ನಾವತಿ ಭದ್ರಸೇನನನ್ನು ನಿರಾಕರಿಸುತ್ತಾಳೆ. ಭದ್ರಸೇನ ಅವಳನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವಾಗ ವಿದ್ಯುಲ್ಲೋಚನನೆಂಬ ರಕ್ಕಸನ ಪ್ರವೇಶ. ಭದ್ರಸೇನನಿಂದ ರತ್ನಾವತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ರಕ್ಕಸ ಮದುವೆಗೆ ಒತ್ತಾಯಿಸಿ ಬಂಧನದಲ್ಲಿರಿಸುತ್ತಾನೆ. ರಕ್ಕಸನ ಅಂಕೆಯಿಂದ ಆಕೆ ಪಾರಾಗಿ ವತ್ಸಾಖ್ಯನನ್ನು ಸೇರಿಕೊಳ್ಳುತ್ತಾಳಾ. ಹೇಗೆ? ಎಂಬ ಒಂದು ಮಧುರ ಕಾವ್ಯಾತ್ಮಕ ಪ್ರಸಂಗ ಇದಾಗಿದೆ.

ವಿನಯ ಭಟ್ ಭದ್ರಸೇನನಾಗಿ, ಅಂಬರೀಶ್ ಭಟ್ ವತ್ಸಾಖ್ಯನಾಗಿ, ಸುರೇಶ್ ತಂತ್ರಾಡಿ ವಿದ್ಯುಲ್ಲೋಚನನಾಗಿ, ರಾಧಾಕೃಷ್ಣ ಉರಾಳ ರತ್ನಾವತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಗರ ವೇಣುಗೋಪಾಲ್, ರಾಘವೇಂದ್ರ ಬಿಡುವಾಳ್, ಕಾರ್ತಿಕ್ ಧಾರೇಶ್ವರ್, ಹಿಮ್ಮೇಳದಲ್ಲಿದ್ದು, ಜಮ್ಮಟಿಕೆ ನಾಗರಾಜ್ ಮೋರ್ಚಿ೦ಗ್ ಪ್ರಯೋಗ ಯಕ್ಷಗಾನಕ್ಕೆ ಹೊಸತನ ನೀಡಲಿದೆ, ನಿರ್ವಹಣೆ ವಿಶ್ವನಾಥ ಉರಾಳ, ಮುರಳೀಧರ ನಾವಡ. ಸಹಕಾರ ಸತ್ಯನಾರಾಯಣ್, ದೇವರಾಜ ಕರಬ, ನಿತ್ಯಾನಂದ ನಾಯಕ್, ಕೆ.ಎನ್.ಅಡಿಗ, ಮಮತ ಆರ್ ಕೆ ಅವರ ಸಹಕಾರದೊಂದಿಗೆ ನಡೆಯುವ ಪ್ರದರ್ಶನಕ್ಕೆ ಎಲ್ಲರಿಗೂ ಸ್ವಾಗತ. ಹೆಚ್ಚಿನ ವಿವರಗಳಿಗೆ 9845663646 ಸ೦ಪರ್ಕಿಸಿ.

ಕಲಾಕದಂಬ ಆರ್ಟ್ ಸೆಂಟರ್,
182/1, 9ನೇ ಅಡ್ಡರಸ್ತೆ,
ತ್ಯಾಗರಾಜನಗರ,
ಬೆ೦ಗಳೂರು-560028
ದೂ : 9448510582





ಅಂಬರೀಶ್ ಭಟ್ , ಸುರೇಶ್ ತಂತ್ರಾಡಿ




ರಾಧಾಕೃಷ್ಣ ಉರಾಳ




ವಿನಯ ಭಟ್



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ